Sunday 17 January 2010

ಕನ್ನಡ ಟೈಪಿಂಗ್ ನಲ್ಲಿ ಸುಧಾರಣೆ

ಇಂಚರದ ಹಕ್ಕಿಗಳಿಗೆ ನಮಸ್ತೆ.

ಬಹಳ ದಿನಗಳ ಬಳಿಕ ಇಂಚರ ಬ್ಲಾಗ್ ನಲ್ಲಿ ಚಿಲಿಪಿಲಿ ಕೇಳಿಸುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಇಂಚರದ ಮೇಲೆ ಕೆಲಸ ಮಾಡಲು ಸಮಯ ಸಿಗಲಿಲ್ಲ.

ಈ ಮಧ್ಯೆ kditor ನ ಜಯರಾಮ ನೆಟ್ಟಾರ್ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.
  • kditor ನ್ನು ಈಗ chrome ಗೆ ಹೊಂದುವಂತೆ ಮಾಡಲಾಗಿದೆ. ಈಗ IE, Firefox ಮತ್ತು Chrome ಗಳಲ್ಲಿ ಇಂಚರ ಕೆಲಸ ಮಾಡುತ್ತಿದೆ.
  • ಕನ್ನಡ ಮತ್ತು ಇಂಗ್ಲಿಶ್ ಮಧ್ಯೆ ಟಾಗಲ್ ಮಾಡಲು Ctrl+G ಬಳಸಿ.
ನಿಮಗೆ ಇದರಿಂದ ಯಾವುದಾದರೂ ತೊಂದರೆ ಆಗುತ್ತಿದ್ದಲ್ಲಿ ದಯವಿಟ್ಟು ತಿಳಿಸಿ.

ಮುಂದಿನ ದಿನಗಳಲ್ಲಿ ನಾನು ಈಗಾಗಲೇ ಪಬ್ಲಿಶ್ ಮಾಡಿರುವ ಇಂಚರ ವಿಶ್ ಲಿಸ್ಟ್ ನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತೇನೆ.
ಮತ್ತೆ ಸಿಗೋಣ,
ವಸಂತ್ ಕಜೆ
ಇಂಚರ

Saturday 5 December 2009

ನನ್ನೂ ಸೇರಿಸ್ಕೊಳ್ಳಿ

ಇಂಚರದ ಬಂಧುಗಳಿಗೆ ನಮಸ್ತೆ,
  • ಇಂಚರದ ವಿಶ್ ಲಿಸ್ಟ್ ನಿನ್ನೆ ಕೊಟ್ಟಿದ್ದೆ. ಅದರಲ್ಲಿ ಮೊದಲನೆಯದುಪೂರ್ಣಗೊಂಡಿದೆ.
  • ಇಂಚರ.ನೆಟ್ ಗೆ ಲಾಗಿನ್ ಆಗದೆ ಬಂದರೆ ನಿಮಗೆ ಬಲಭಾಗದಲ್ಲಿಕಾಣಿಸುತ್ತಿದ್ದ ಚಿತ್ರ ಬದಲಾಗಿದೆ. ಸೈನಪ್ ಗೆ ಕೆಳಗಿನಹೊಸಚಿತ್ರವನ್ನು ಹಾಕಲಾಗಿದೆ. ಚಿತ್ರವನ್ನು ಇಂಕ್ ಸ್ಕೇಪ್ ಬಳಸಿ ಮಾಡಿದ್ದೇನೆ.

Friday 4 December 2009

ಇಂಚರ - ಆಗುತ್ತಿರುವ ಬದಲಾವಣೆಗಳು

ಕನ್ನಡದ ಟುವ್ವಿ ಹಾಡುತ್ತಿರುವ ಹಕ್ಕಿಗಳಿಗೆ ನಮಸ್ತೆ.

ನೇರವಾಗಿ ವಿಷಯಕ್ಕೆ ಬರುತ್ತೇನೆ.
೧)
ಮೊದಲಿಗೆ ನಿಮಗೆ ಕಾಣುತ್ತಿರುವಂತೆ 'ಇಂಚರ ಬ್ಲಾಗ್' ಗೆ ಲಿಂಕ್ ಕೊಡಲಾಗಿದೆ. ಚಾಮರಾಜ್, ಬ್ಲಾಗ್ ನ ಪ್ರಿವ್ಯೂ ಕಾಣುವಂತಿದ್ದರೆ ಚೆನ್ನಾಗಿರುತ್ತದೆ ಅಂದಿದ್ದರು. ಆದರೆ ಅದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಮತ್ತು ಇಂಚರ ಬ್ಲಾಗ್ ಅಷ್ಟು frequent ಆಗಿ ಅಪ್ಡೇಟ್ ಆಗಲಿಕ್ಕಿಲ್ಲ (ಬಹುಶ:) ಆದರಿಂದ ಅದರ ಉಪಯೋಗ ಹೆಚ್ಚಿರಲಿಕ್ಕಿಲ್ಲ.

೨) ಎರಡನೆಯದಾಗಿ ಇಂಚರದಲ್ಲಿ ಆಗಬೇಕೆಂದು ಇರುವ ಕೆಲವು ಬದಲಾವಣೆಗಳು.
  • ಚಿಲಿಪಿಲಿಗಳು ಕಾಣಿಸುವಾಗ 'ಹೈಪರ್ ಲಿಂಕು' ಗಳಾಗಿ ಬರದೆ ಸಾಮಾನ್ಯ ಟೆಕ್ಸ್ಟ್ ಆಗಿ ಬರುವುದು. ಒಂದು ವೇಳೆ ಚಿಲಿಪಿಲಿಗಳು ಸ್ವತಃ 'ಹೈಪರ್ಲಿಂಕು' ಗಳನ್ನೂ ಹೊಂದಿದ್ದರೆ ಅವನ್ನು ನೇರವಾಗಿ ಕ್ಲಿಕ್ಕಿಸುವುದು (ಇನ್ನೊಂದು ಪುಟಕ್ಕೆ ಹೋಗದೆ)
  • ಚಿಲಿಪಿಲಿಗಳನ್ನು ಏಕಕಾಲಕ್ಕೆ ಇಂಚರ ಮತ್ತು Twitterಗೆ ಪೋಸ್ಟ್ ಮಾಡುವುದು (optional ಆಗಿ)
  • ಕಮೆಂಟುಗಳನ್ನು ಬರೆಯಲು ಹೊಸ ಪುಟಕ್ಕೆ ಹೋಗದೆ ಇರುವ ಪುಟದಲ್ಲಿಯೇ ಚಿಕ್ಕ ಕಿಂಡಿಯ ಮೂಲಕ ಬರೆಯುವಂತಾಗುವುದು
  • ಇಂಚರದ ಎಲ್ಲ ಪುಟಗಳಲ್ಲಿ ಲೋಗೋ ಮತ್ತು ಇತರೆ ಉಪಯುಕ್ತ ವಿಷಯಗಳು ಬರುವುದು
  • ಕನ್ನಡ ದಿನ ವಿಶೇಷಗಳನ್ನು ತೋರಿಸುವುದು (ಸ್ವಲ್ಪ ದೀರ್ಘಾವದಿ ಯೋಜನೆ)
ಇನ್ನೂ ಸಾಕಷ್ಟು ಯೋಚನೆಗಳಿವೆ. ಸತ್ಯ ಹೇಳಬೇಕೆಂದರೆ ಇಂಚರವನ್ನು ಜನ ಎಷ್ಟು ಆಲಿಂಗಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವುಗಳ implementation ನಿಂತಿದೆ. ವಿಶ್ವಾಸ ನಮ್ಮದು, ಉಳಿದದ್ದು ನಿಮ್ಮದು.

ಎಂದಿನಂತೆ ನಿಮ್ಮ ಸಲಹೆಗಳನ್ನು ಇಂಚರದಲ್ಲಿ ಅಥವಾ ಈ ಬ್ಲಾಗ್ ಗೆ ಕಮೆಂಟಿನ ರೂಪದಲ್ಲಿ ಅಥವಾ spandana inchara.net ಮೇಲ್ ಮಾಡುವ ಮೂಲಕ ತಿಳಿಸಿ.

ವಿಶ್ವಾಸಿ,
ವಸಂತ್ ಕಜೆ.

Thursday 3 December 2009

ಮೊದಲ ಚಿಲಿಪಿಲಿ ಹಾಡು

ನಮಸ್ತೆ,
ಇಂಚರ
ಹುಟ್ಟಿ ಇಂದಿಗೆ 7 ದಿನಗಳು. ಕಳೆದ ವಾರ ಜಿಮೈಲ್ ಸ್ಟೇಟಸ್ ಮೆಸೇಜಿನಲ್ಲಿ ಇಂಚರದ ಲಿಂಕು ಹರಿಯ ಬಿಟ್ಟಿದ್ದೆ. ಒಂದು ವಾರವಾಗುವಷ್ಟರಲ್ಲಿ ನೂರಾರು ಹಕ್ಕಿಗಳು ಹಾರಿ ಬಂದು ಕುಳಿತಿವೆ, ಚಿಲಿಪಿಲಿ ಹಾಡುತ್ತಿವೆ, ಕೇಳುತ್ತಿವೆ.

ಈಗಾಗಲೇ Twitter ಇದೆಯಲ್ಲ, ಇಂಚರ ಯಾಕೆ ಎಂಬ ಪ್ರಶ್ನೆ ಸಹಜ. ನನ್ನ ಪ್ರಕಾರ ಇಂಟರ್ನೆಟ್ಟಿನಲ್ಲಿ ಕನ್ನಡವನ್ನು ವರ್ಗದ ಜನರು ಓದುತ್ತಾರೆ. ಮೊದಲನೆಯವರು ಇಂಗ್ಲಿಶ್ ಅಭ್ಯಾಸ ಸ್ವಲ್ಪ ಕಡಿಮೆಯೇ ಇದ್ದುದರಿಂದ ಸಹಜವಾಗಿ ಕನ್ನಡ ಓದುವವರು. ಎರಡನೆಯವರು ದಿನಬಳಕೆಯಲ್ಲಿ ಇಂಗ್ಲಿಷನ್ನೇ ಬಳಸುತ್ತಿದ್ದರೂ ಕನ್ನಡ ಓದಬೇಕೆಂಬ ಪ್ರೀತಿಯಿಂದ ಕನ್ನಡ ಓದುವವರು. ಈ ಎರಡೂ ವರ್ಗದವರಿಗೆ ಕನ್ನಡದಲ್ಲಿ ಮೈಕ್ರೋ ಬ್ಲಾಗಿಂಗ್ ಬೇಕೆನಿಸುತ್ತದೆ.

ಇವೆರದಲ್ಲದೆ ನನಗೆ ಇನ್ನೊಂದು ಸ್ವಾರ್ಥವೂ ಇತ್ತೆನ್ನಿ. ಇಂಚರ ಗೂಗಲ್ app engine ಮೇಲೆ ಹೋಸ್ಟ್ ಆಗಿದೆ. ನನಗೆ cloud computing ನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕೆಂಬ ಆಸೆ ಸ್ವಲ್ಪ ಇದ್ದುದು ಮತ್ತು ನನಗೆ appengine ಗೆ compatible ಆದ ಮೈಕ್ರೋ ಬ್ಲಾಗಿಂಗ್ ತಂತ್ರಾಂಶ ಸಿಕ್ಕಿದುದು ಕಾಕತಾಳೀಯ!

ಇಂಚರಕ್ಕೆ ಕೊಡುಗೆ ಸಲ್ಲಿಸಿರುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ತಯಾರಿಕರಿಗೆ ವಂದಿಪೆ ನಿನಗೆ ಗಣನಾಥ! ಅವರ ಪಟ್ಟಿ ಹೀಗಿದೆ.
  • ಜೈಕು (ಮೈಕ್ರೋ ಬ್ಲಾಗ್ಗಿಂಗ್ ಇಂಜಿನ್)
  • ಜಯರಾಮ ನೆಟ್ಟಾರ್ (kditor.com) - ಕನ್ನಡದಲ್ಲಿ ನೇರ ಟೈಪಿಂಗ್ ಸೌಲಭ್ಯ
  • ಉಬುಂಟು ( ನನ್ನ ಎಲ್ಲ ಕೆಲಸ ಕಾರ್ಯಗಳಿಗೆ ವೇದಿಕೆ)
ಇವರಷ್ಟೇ ಅಲ್ಲದೆ ಸಮಾನ ಮನಸ್ಕರಿಗೆ ಇಂಚರದ ಇರವನ್ನು ತಿಳಿಸಿದ ಅಶೋಕ್ ಕುಮಾರ್, ಅನುಭವಿ ಪತ್ರಕರ್ತರಾದ ಜಿಯನ್ ಮೋಹನ್ ಮತ್ತು ಚಾಮರಾಜ್ ಸವಡಿ, ಟೆಕ್ನಿಕಲ್ ಕಷ್ಟಸುಖಗಳಲ್ಲಿ ಜೊತೆ ನೀಡುವ ಹರಿ ನಾಡಿಗ್ ಮತ್ತು ಓಂ ಶಿವು ಅವರಿಗೂ ವಂದನೆಗಳು :)

ಇಂಚರದಲ್ಲಿ ನನಗೆ ತಿಳಿದಂತೆ ಹಲವು ಬದಲಾವಣೆಗಳು, ಉತ್ತಮಿಕೆಗಳು ಆಗಬೇಕಿವೆ. ಅವನ್ನು ಮುಂದಿನ ಪೋಸ್ಟ್ ನಲ್ಲಿ ಬರೆಯುತ್ತೇನೆ.

ಅಂದ ಹಾಗೆ ನಿಮಗೆ ಮೊದಲ ನೋಟಕ್ಕೆ ಇಂಚರ ಹೇಗನ್ನಿಸಿತು? ನಮಗೆ ತಿಳಿಸಿ. ಇಂಚರದಲ್ಲಿಯೇ ಚಿಲಿಪಿಲಿಗುಟ್ಟಿದರೂ ಸರಿಯೇ!

ವಸಂತ್ ಕಜೆ.
spandana [at] inchara [dot] net