Friday 4 December 2009

ಇಂಚರ - ಆಗುತ್ತಿರುವ ಬದಲಾವಣೆಗಳು

ಕನ್ನಡದ ಟುವ್ವಿ ಹಾಡುತ್ತಿರುವ ಹಕ್ಕಿಗಳಿಗೆ ನಮಸ್ತೆ.

ನೇರವಾಗಿ ವಿಷಯಕ್ಕೆ ಬರುತ್ತೇನೆ.
೧)
ಮೊದಲಿಗೆ ನಿಮಗೆ ಕಾಣುತ್ತಿರುವಂತೆ 'ಇಂಚರ ಬ್ಲಾಗ್' ಗೆ ಲಿಂಕ್ ಕೊಡಲಾಗಿದೆ. ಚಾಮರಾಜ್, ಬ್ಲಾಗ್ ನ ಪ್ರಿವ್ಯೂ ಕಾಣುವಂತಿದ್ದರೆ ಚೆನ್ನಾಗಿರುತ್ತದೆ ಅಂದಿದ್ದರು. ಆದರೆ ಅದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಮತ್ತು ಇಂಚರ ಬ್ಲಾಗ್ ಅಷ್ಟು frequent ಆಗಿ ಅಪ್ಡೇಟ್ ಆಗಲಿಕ್ಕಿಲ್ಲ (ಬಹುಶ:) ಆದರಿಂದ ಅದರ ಉಪಯೋಗ ಹೆಚ್ಚಿರಲಿಕ್ಕಿಲ್ಲ.

೨) ಎರಡನೆಯದಾಗಿ ಇಂಚರದಲ್ಲಿ ಆಗಬೇಕೆಂದು ಇರುವ ಕೆಲವು ಬದಲಾವಣೆಗಳು.
  • ಚಿಲಿಪಿಲಿಗಳು ಕಾಣಿಸುವಾಗ 'ಹೈಪರ್ ಲಿಂಕು' ಗಳಾಗಿ ಬರದೆ ಸಾಮಾನ್ಯ ಟೆಕ್ಸ್ಟ್ ಆಗಿ ಬರುವುದು. ಒಂದು ವೇಳೆ ಚಿಲಿಪಿಲಿಗಳು ಸ್ವತಃ 'ಹೈಪರ್ಲಿಂಕು' ಗಳನ್ನೂ ಹೊಂದಿದ್ದರೆ ಅವನ್ನು ನೇರವಾಗಿ ಕ್ಲಿಕ್ಕಿಸುವುದು (ಇನ್ನೊಂದು ಪುಟಕ್ಕೆ ಹೋಗದೆ)
  • ಚಿಲಿಪಿಲಿಗಳನ್ನು ಏಕಕಾಲಕ್ಕೆ ಇಂಚರ ಮತ್ತು Twitterಗೆ ಪೋಸ್ಟ್ ಮಾಡುವುದು (optional ಆಗಿ)
  • ಕಮೆಂಟುಗಳನ್ನು ಬರೆಯಲು ಹೊಸ ಪುಟಕ್ಕೆ ಹೋಗದೆ ಇರುವ ಪುಟದಲ್ಲಿಯೇ ಚಿಕ್ಕ ಕಿಂಡಿಯ ಮೂಲಕ ಬರೆಯುವಂತಾಗುವುದು
  • ಇಂಚರದ ಎಲ್ಲ ಪುಟಗಳಲ್ಲಿ ಲೋಗೋ ಮತ್ತು ಇತರೆ ಉಪಯುಕ್ತ ವಿಷಯಗಳು ಬರುವುದು
  • ಕನ್ನಡ ದಿನ ವಿಶೇಷಗಳನ್ನು ತೋರಿಸುವುದು (ಸ್ವಲ್ಪ ದೀರ್ಘಾವದಿ ಯೋಜನೆ)
ಇನ್ನೂ ಸಾಕಷ್ಟು ಯೋಚನೆಗಳಿವೆ. ಸತ್ಯ ಹೇಳಬೇಕೆಂದರೆ ಇಂಚರವನ್ನು ಜನ ಎಷ್ಟು ಆಲಿಂಗಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವುಗಳ implementation ನಿಂತಿದೆ. ವಿಶ್ವಾಸ ನಮ್ಮದು, ಉಳಿದದ್ದು ನಿಮ್ಮದು.

ಎಂದಿನಂತೆ ನಿಮ್ಮ ಸಲಹೆಗಳನ್ನು ಇಂಚರದಲ್ಲಿ ಅಥವಾ ಈ ಬ್ಲಾಗ್ ಗೆ ಕಮೆಂಟಿನ ರೂಪದಲ್ಲಿ ಅಥವಾ spandana inchara.net ಮೇಲ್ ಮಾಡುವ ಮೂಲಕ ತಿಳಿಸಿ.

ವಿಶ್ವಾಸಿ,
ವಸಂತ್ ಕಜೆ.

No comments:

Post a Comment