Thursday 3 December 2009

ಮೊದಲ ಚಿಲಿಪಿಲಿ ಹಾಡು

ನಮಸ್ತೆ,
ಇಂಚರ
ಹುಟ್ಟಿ ಇಂದಿಗೆ 7 ದಿನಗಳು. ಕಳೆದ ವಾರ ಜಿಮೈಲ್ ಸ್ಟೇಟಸ್ ಮೆಸೇಜಿನಲ್ಲಿ ಇಂಚರದ ಲಿಂಕು ಹರಿಯ ಬಿಟ್ಟಿದ್ದೆ. ಒಂದು ವಾರವಾಗುವಷ್ಟರಲ್ಲಿ ನೂರಾರು ಹಕ್ಕಿಗಳು ಹಾರಿ ಬಂದು ಕುಳಿತಿವೆ, ಚಿಲಿಪಿಲಿ ಹಾಡುತ್ತಿವೆ, ಕೇಳುತ್ತಿವೆ.

ಈಗಾಗಲೇ Twitter ಇದೆಯಲ್ಲ, ಇಂಚರ ಯಾಕೆ ಎಂಬ ಪ್ರಶ್ನೆ ಸಹಜ. ನನ್ನ ಪ್ರಕಾರ ಇಂಟರ್ನೆಟ್ಟಿನಲ್ಲಿ ಕನ್ನಡವನ್ನು ವರ್ಗದ ಜನರು ಓದುತ್ತಾರೆ. ಮೊದಲನೆಯವರು ಇಂಗ್ಲಿಶ್ ಅಭ್ಯಾಸ ಸ್ವಲ್ಪ ಕಡಿಮೆಯೇ ಇದ್ದುದರಿಂದ ಸಹಜವಾಗಿ ಕನ್ನಡ ಓದುವವರು. ಎರಡನೆಯವರು ದಿನಬಳಕೆಯಲ್ಲಿ ಇಂಗ್ಲಿಷನ್ನೇ ಬಳಸುತ್ತಿದ್ದರೂ ಕನ್ನಡ ಓದಬೇಕೆಂಬ ಪ್ರೀತಿಯಿಂದ ಕನ್ನಡ ಓದುವವರು. ಈ ಎರಡೂ ವರ್ಗದವರಿಗೆ ಕನ್ನಡದಲ್ಲಿ ಮೈಕ್ರೋ ಬ್ಲಾಗಿಂಗ್ ಬೇಕೆನಿಸುತ್ತದೆ.

ಇವೆರದಲ್ಲದೆ ನನಗೆ ಇನ್ನೊಂದು ಸ್ವಾರ್ಥವೂ ಇತ್ತೆನ್ನಿ. ಇಂಚರ ಗೂಗಲ್ app engine ಮೇಲೆ ಹೋಸ್ಟ್ ಆಗಿದೆ. ನನಗೆ cloud computing ನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕೆಂಬ ಆಸೆ ಸ್ವಲ್ಪ ಇದ್ದುದು ಮತ್ತು ನನಗೆ appengine ಗೆ compatible ಆದ ಮೈಕ್ರೋ ಬ್ಲಾಗಿಂಗ್ ತಂತ್ರಾಂಶ ಸಿಕ್ಕಿದುದು ಕಾಕತಾಳೀಯ!

ಇಂಚರಕ್ಕೆ ಕೊಡುಗೆ ಸಲ್ಲಿಸಿರುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ತಯಾರಿಕರಿಗೆ ವಂದಿಪೆ ನಿನಗೆ ಗಣನಾಥ! ಅವರ ಪಟ್ಟಿ ಹೀಗಿದೆ.
  • ಜೈಕು (ಮೈಕ್ರೋ ಬ್ಲಾಗ್ಗಿಂಗ್ ಇಂಜಿನ್)
  • ಜಯರಾಮ ನೆಟ್ಟಾರ್ (kditor.com) - ಕನ್ನಡದಲ್ಲಿ ನೇರ ಟೈಪಿಂಗ್ ಸೌಲಭ್ಯ
  • ಉಬುಂಟು ( ನನ್ನ ಎಲ್ಲ ಕೆಲಸ ಕಾರ್ಯಗಳಿಗೆ ವೇದಿಕೆ)
ಇವರಷ್ಟೇ ಅಲ್ಲದೆ ಸಮಾನ ಮನಸ್ಕರಿಗೆ ಇಂಚರದ ಇರವನ್ನು ತಿಳಿಸಿದ ಅಶೋಕ್ ಕುಮಾರ್, ಅನುಭವಿ ಪತ್ರಕರ್ತರಾದ ಜಿಯನ್ ಮೋಹನ್ ಮತ್ತು ಚಾಮರಾಜ್ ಸವಡಿ, ಟೆಕ್ನಿಕಲ್ ಕಷ್ಟಸುಖಗಳಲ್ಲಿ ಜೊತೆ ನೀಡುವ ಹರಿ ನಾಡಿಗ್ ಮತ್ತು ಓಂ ಶಿವು ಅವರಿಗೂ ವಂದನೆಗಳು :)

ಇಂಚರದಲ್ಲಿ ನನಗೆ ತಿಳಿದಂತೆ ಹಲವು ಬದಲಾವಣೆಗಳು, ಉತ್ತಮಿಕೆಗಳು ಆಗಬೇಕಿವೆ. ಅವನ್ನು ಮುಂದಿನ ಪೋಸ್ಟ್ ನಲ್ಲಿ ಬರೆಯುತ್ತೇನೆ.

ಅಂದ ಹಾಗೆ ನಿಮಗೆ ಮೊದಲ ನೋಟಕ್ಕೆ ಇಂಚರ ಹೇಗನ್ನಿಸಿತು? ನಮಗೆ ತಿಳಿಸಿ. ಇಂಚರದಲ್ಲಿಯೇ ಚಿಲಿಪಿಲಿಗುಟ್ಟಿದರೂ ಸರಿಯೇ!

ವಸಂತ್ ಕಜೆ.
spandana [at] inchara [dot] net

1 comment:

  1. ಬ್ಲಾಗ್‌ ಪ್ರಾರಂಭಿಸಿದ್ದು ಒಳ್ಳೆಯದಾಯ್ತು ವಸಂತ್‌. ಈ ಬ್ಲಾಗ್‌ ಕೊಂಡಿಯನ್ನು ಇಂಚರ ಮುಖಪುಟದ ಬಲಗಡೆ ಭಾಗದಲ್ಲಿ ಎದ್ದು ಕಾಣುವಂತೆ ಹಾಕಲು ಸಾಧ್ಯವಾ? ಜೊತೆಗೆ, ಮಿನಿ ವಿಂಡೋ ಥರ ಮಾಡಿ, ಬ್ಲಾಗ್‌ನ ಇತ್ತೀಚಿನ ಬರಹದ ಒಂದು ಪ್ಯಾರಾ ಕಾಣುವಂತೆ ಮಾಡಿದರೆ, ತುಂಬ ಜನರಿಗೆ ಹೆಚ್ಚಿನ ಮಾಹಿತಿ ಸುಲಭದಲ್ಲಿ ಸಿಕ್ಕಂತಾಗುತ್ತದೆ.

    ReplyDelete